ಕೆಳಗೆ ಕೊಟ್ಟಿರುವ ಗದ್ಯಭಾಗವನ್ನು ಎಚ್ಚರಿಕೆಯಿಂದ ಓದಿ ಕೇಳಿರುವ ಪ್ರಶ್ನೆಗಳಿಗೆ ನೇರ, ಸರಳ, ಸ್ಪಷ್ಟ ಮತ್ತು ಸಂಕ್ಷಿಪ್ತವಾಗಿ ಉತ್ತರಿಸಿ : (12×5=60)
ದುಃಖದ ಸ್ಥಾನದಲ್ಲಿ ಭಯವು ಆವರಿಸುತ್ತದೆ. ಹಾಗೆಯೇ ಆನಂದದ ಸ್ಥಾನದಲ್ಲಿ ಉತ್ಸಾಹವಿರುತ್ತದೆ. ನೋವು ಮತ್ತು ನಷ್ಟವನ್ನು ಸಹಿಸಿಕೊಳ್ಳಲು ಉತ್ಸಾಹಭರಿತ ಕ್ರಿಯಾಶೀಲತೆಯ ಸಂತೋಷದ ಅಗತ್ಯವಿದೆ. ಬದುಕಿನ ಕಷ್ಟ ಮತ್ತು ನಷ್ಟದ ತೀವ್ರತೆಯನ್ನು ಆಧರಿಸಿ ಉತ್ಸಾಹಶೀಲದ ಬೇರೆ ಬೇರೆ ವಿಧಾನಗಳಿವೆ. ಸಾಹಿತ್ಯ ಮೀಮಾಂಸಕರ ಪ್ರಕಾರ ಉತ್ಸಾಹಕ್ಕೆ ಯುದ್ಧವೀರತ್ವ, ದಾನವೀರತ್ವ, ಹಾಗೂ ದಯಾವೀರತ್ವವೆಂಬ ಇತ್ಯಾದಿ ಪ್ರಭೇದಗಳಿವೆ. ಇವುಗಳಲ್ಲಿ ಪ್ರಾಚೀನವಾದ ಮತ್ತು ಪ್ರಧಾನವಾದ ಶುದ್ಧ ವೀರತ್ವವೂ ಇರುತ್ತದೆ. ಇವುಗಳಲ್ಲಿ ಆಘಾತ, ಪೀಡೆ, ಮೃತ್ಯು ಮುಂತಾದವುಗಳನ್ನು ಮೀರಿದ ಯುದ್ಧವೀರತ್ವವು ಅತ್ಯಂತ ಪ್ರಾಚೀನವಾದುದು. ಇದರಲ್ಲಿ ಸಾವು ನೋವುಗಳು ಗಂಭೀರವಾದ ಯಾತನೆಗಳು ಯಾವ ಗಣನೆಗೆ ಬರುವುದಿಲ್ಲ. ಪ್ರಾಚೀನ ಕಾಲದಿಂದ ಈ ರೀತಿಯ ವೀರತ್ವದ ಅಭ್ಯಾಸ ಜಾರಿಯಲ್ಲಿದ್ದು ಇದರಲ್ಲಿ ಧೈರ್ಯ ಮತ್ತು ಪ್ರಯತ್ನ ಉತ್ತುಂಗ ಮಟ್ಟದಲ್ಲಿರುತ್ತದೆ. ಅಲ್ಲದೆ ಸಾಮಾನ್ಯವಾಗಿ ಧೈರ್ಯ ಮತ್ತು ಪರಾಕ್ರಮಕ್ಕೆ ಅನುಗುಣವಾಗಿ ಅವುಗಳ ಗುಣವಿಶೇಷಣೆಯನ್ನು ಹೇಳಲಾಗುತ್ತದೆ. ಅದರ ಉತ್ಸಾಹಶೀಲತೆಯು ಕೇವಲ ಒಂದು ಪ್ರಕಾರವಾಗಿ ಉಳಿಯಲಿಲ್ಲ. ಧೈರ್ಯವು ಎಂದಿಗೂ ನೋವು ಮತ್ತು ಮಿಡಿತಕ್ಕೆ ಒಳಗಾಗುವುದಿಲ್ಲ. ಅದು ಒಟ್ಟಾಗಿ ಆನಂದ ಮತ್ತು ಅದರ ಹುಡುಕಾಟದ ನೆಲೆಗಾಗಿ ಪ್ರಯತ್ನಿಸುತ್ತಲೇ ಇರುತ್ತದೆ. ಹೀಗಿರುವಾಗ ಆಂತರಿಕವಾಗಿ ಆಗಲಿ, ಇಲ್ಲವೇ ಬಾಹ್ಯವಾಗಿ ಆಗಲಿ ನಮ್ಮಲ್ಲಿನ ಧೈರ್ಯವು ಎಂದಿಗೂ ಕಳೆದು ಹೋಗುವುದಿಲ್ಲ. ಉತ್ಸಾಹಶೀಲತೆಯು ಹಾಗೆಯೇ ಉಳಿಯುತ್ತದೆ. ಉಳಿದವುಗಳು ಮೌನವಾಗಿ ಕೈ ಕಾಲು ಬಡಿಯದೆ, ಅಲ್ಲಾಡದೆ ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸುತ್ತದೆ ಮತ್ತು ಉಳಿದ ಯಾತನೆಗಳನ್ನು ಅದು ತನ್ನಲ್ಲಿಯೇ ಸಹಿಸಿಕೊಂಡು ಮುಂದುವರೆಯುತ್ತದೆ. ಈ ಬಗೆಯ ಧೈರ್ಯ ಮತ್ತು ಪರಿಶ್ರಮಗಳು ಉತ್ಸಾಹಶೀಲತೆಯ ಭಾಗವೆಂದೇ ಹೇಳಬಹುದು. ಯಾರು ಧೈರ್ಯಶಾಲಿಗಳಾಗಿರುತ್ತಾರೋ, ಇಲ್ಲವೆ ತಾಳ್ಮೆ ಸಹನೆಯ ಗುಣಗಳನ್ನು ಹೊಂದಿರುತ್ತಾರೋ ಅವರು ಅದರ ಸಂತೋಷವನ್ನು ಅನುಭವಿಸುತ್ತಾರೆ. ಇವರು ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸುವ ಸಾಮರ್ಥ್ಯವನ್ನು ಹೊಂದಿರುತ್ತಾರೆ. ಈ ಬಗೆಯ ಉತ್ಸಾಹಶೀಲತೆಯು ಒಂದು ರೀತಿಯ ಸಂತೋಷದಾಯಕ ಶಕ್ತಿ ಎಂದೇ ಹೇಳಬಹುದು. ಅದರಲ್ಲಿರುವ ಹುಡುಕಾಟವು ದುರ್ಬಲ ಲಕ್ಷಣಗಳ ವರ್ತನೆಯಾಗಿರುವುದಿಲ್ಲ. ಅದಕ್ಕೆ ಬದಲಾಗಿ ನೋವುಗಳನ್ನು ಸಹಿಸುವ ಗುಣಗಳನ್ನು ಹೊಂದಿರುತ್ತಾರೆ. ಹೀಗೆ ತಾಳ್ಮೆ ಮತ್ತು ಧೈರ್ಯಗಳೆರಡೂ ಉತ್ಸಾಹಶೀಲತೆಯ ಭಾಗನೇ ಆಗಿರುತ್ತವೆ. ಈ ರೀತಿಯ ವಾತ್ಸಲ್ಯ ಮತ್ತು ಪ್ರೀತಿಯ ಧಾರೆಗಳು ಧೈರ್ಯ ಮತ್ತು ತ್ಯಾಗವನ್ನು ತೋರಿಸುವ ಸಂಪತ್ತಿನ ವಾಹಕಗಳಾಗಿರುತ್ತಾರೆ.
ಈ ರೀತಿಯ ಶಕ್ತಿ ಮತ್ತು ಗುಣವಿಶೇಷತೆಯನ್ನು ಹೊಂದಿರುವವರು ಧೈರ್ಯ ಮತ್ತು ಸಹಾನುಭೂತಿಯ ಸಂಪತ್ತನ್ನು ಹೊಂದಿರುತ್ತಾರೆ. ಅವರು ನೋವು ಮತ್ತು ಎದುರಾದ ಕಷ್ಟ ಕಾರ್ಪಣ್ಯಗಳನ್ನು ಸಹಿಸಿಕೊಂಡು ಉದಾರವಾದ ಜೀವನಮೌಲ್ಯಗಳನ್ನು ಪ್ರಸಾರ ಮಾಡುವವರಾಗಿರುತ್ತಾರೆ. ದಾನಿಗಳು ತಮ್ಮ ಅನುಭವದಿಂದ ಕಷ್ಟಗಳನ್ನು ಎದುರಿಸಿ ಜೀವನಪರ್ಯಂತ ಜನರಿಗೆ ನೀಡುವ ದಾನಧರ್ಮಗಳ ಮೂಲಕ ಶ್ರೇಷ್ಠತೆಯನ್ನು ಮರೆಯುತ್ತಾರೆ. ಈ ಬಗೆಯ ಜೀವನದ ಕಠಿಣತೆಯನ್ನು ಎದುರಿಸುವವರು ಶಕ್ತಿಯ ವಿಶೇಷತೆ ಮತ್ತು ತ್ಯಾಗದ ಸಂಪತ್ತನ್ನು ಮನೆಮಾಡಿಕೊಂಡಿರುತ್ತಾರೆ. ಹಾಗೆಯೇ ಅವರಲ್ಲಿ ಉದಾರವಾದ ಮೌಲ್ಯದೊಂದಿಗೆ ಹೃದಯ ವೈಶಾಲ್ಯವಿರುತ್ತದೆ. ಅವರು ತಮಗೆ ಲಭಿಸುವ ಸಂತೋಷ ಮತ್ತು ಉತ್ಸಾಹಶೀಲತೆಯನ್ನು ಎಂದಿಗೂ ಯಾವುದರಲ್ಲೂ ಸೇರಿಸಲು ಬಯಸುವುದಿಲ್ಲ.
ಯುದ್ಧ ಮಾತ್ರವಲ್ಲದೇ, ಜಗತ್ತಿನಲ್ಲಿ ಇತರ ಕಷ್ಟಕರ ಕಾರ್ಯಗಳಿದ್ದು, ಅವನ್ನು ನಿರ್ವಹಿಸಲು ತೀವ್ರ ದೈಹಿಕ ಬಾಧೆಯ ಅಗತ್ಯವಿರುತ್ತದೆ, ಕೆಲವೊಮ್ಮೆ ಸಾವು ಕೂಡಾ ಸಂಭವಿಸುವ ಸಾಧ್ಯತೆಯಿದೆ. ಹಿಮವತ್ ಪರ್ವತದಲ್ಲಿರುವವನು ಎಂದಿಗೂ ಅಂಜುಬುರುಕರಾಗಿರುವುದಿಲ್ಲ. ಅವರು ಮೋಡದಂತೆ ಯಾವಾಗಲೂ ಚಲನಶೀಲರಾಗಿರುತ್ತಾರೆ. ಪರ್ವತಗಳಂತೆ ದೃಢವಾಗಿರುತ್ತಾರೆ. ಸಂಶೋಧನೆ, ಪ್ರವಾಸ ಮುಂತಾದ ಯಾವುದಕ್ಕಾದರೂ ಅವರು ಹೆದರುವುದಿಲ್ಲ. ಸಹರಾ ಮರುಭೂಮಿಯ ತನಕ ತಲುಪಿ ಯಾರೂ ಇಲ್ಲದ ದಟ್ಟ ಕಾಡುಗಳಲ್ಲಿ ಸಾಹಸದ ಬದುಕನ್ನು ನಡೆಸುವ ಶಕ್ತಿಶಾಲಿಗಳಾಗಿರುತ್ತಾರೆ. ಈ ರೀತಿಯ ಸಂತೋಷದಿಂದಲೇ ಅವರು ತಮ್ಮ ಜೀವನದಲ್ಲಿ ನಿರಂತರ ಉತ್ಸಾಹಶಾಲಿಗಳಾಗಿರುತ್ತಾರೆ. ಇವೆಲ್ಲವೂ ಈ ಮೊದಲು ವಿಧಿತಪಡಿಸಿದ ಉತ್ಸಾಹಶೀಲತೆಯ ಗುಣಲಕ್ಷಣಗಳಾಗಿವೆ.
(a) ಉತ್ಸಾಹಶೀಲತೆಯಲ್ಲಿ ಧೈರ್ಯದ ಪಾತ್ರವನ್ನು ತಿಳಿಸಿ. (12)
(b) ಪರಿಶ್ರಮದ ಅರ್ಥವನ್ನು ವಿವರಿಸಿ. (12)
(c) ಉತ್ಸಾಹಶೀಲತೆಯನ್ನು ಪಡೆಯುವ ಬಗೆ ಹೇಗೆ ? (12)
(d) ಸಂತೋಷ ಮತ್ತು ಉತ್ಸಾಹದ ನಡುವಿನ ಅಂತರ ಸಂಬಂಧವನ್ನು ಗುರುತಿಸಿ. (12)
(e) ಶಕ್ತಿಶಾಲಿಯಾದವನು ತ್ಯಾಗಶೀಲನೂ ಆಗಿರುತ್ತಾನೆ. ವಿಶದೀಕರಿಸಿ. (12)
60 marks · directive: Comprehension
The core of a good answer
The passage argues that enthusiasm (ಉತ್ಸಾಹಶೀಲತೆ) is a joyful, active power: courage and perseverance are its parts, it lets people bear pain and loss, and it shows itself in heroism in war, in giving and in daring enterprises.
An outline written by upsc.help, not an official UPSC answer; every fact checked by a separate review. How we work
What the question asks
Five questions of 12 marks each, all answerable from the passage. Each answer should be a short paragraph in Kannada, in the candidate's own sentences, built on the passage's own ideas: courage and perseverance as parts of enthusiasm, the link between joy and enthusiasm, and the strong person as one who also gives and sacrifices. Nothing from outside the passage is needed.
Answer outline
Introduction
Answer each part separately and briefly, using the passage's key terms (ಧೈರ್ಯ, ಪರಿಶ್ರಮ, ತಾಳ್ಮೆ, ಸಂತೋಷ, ತ್ಯಾಗ, ಉತ್ಸಾಹಶೀಲತೆ).
(a)
- Courage never yields to pain or agitation ('ಧೈರ್ಯವು ಎಂದಿಗೂ ನೋವು ಮತ್ತು ಮಿಡಿತಕ್ಕೆ ಒಳಗಾಗುವುದಿಲ್ಲ') and keeps striving towards joy.
- Because courage, inner or outer, is never lost, enthusiasm also remains ('ನಮ್ಮಲ್ಲಿನ ಧೈರ್ಯವು ಎಂದಿಗೂ ಕಳೆದು ಹೋಗುವುದಿಲ್ಲ. ಉತ್ಸಾಹಶೀಲತೆಯು ಹಾಗೆಯೇ ಉಳಿಯುತ್ತದೆ').
- In war-heroism, the oldest form, courage and effort are at their peak; courage and perseverance are part of enthusiasm ('ಈ ಬಗೆಯ ಧೈರ್ಯ ಮತ್ತು ಪರಿಶ್ರಮಗಳು ಉತ್ಸಾಹಶೀಲತೆಯ ಭಾಗವೆಂದೇ ಹೇಳಬಹುದು').
(b)
- Perseverance is doing one's share of duty silently, without flailing or wavering, and bearing the remaining suffering within oneself while carrying on ('ಮೌನವಾಗಿ ಕೈ ಕಾಲು ಬಡಿಯದೆ, ಅಲ್ಲಾಡದೆ ತನ್ನ ಪಾಲಿನ ಕರ್ತವ್ಯವನ್ನು ನಿರ್ವಹಿಸುತ್ತದೆ ಮತ್ತು ಉಳಿದ ಯಾತನೆಗಳನ್ನು ಅದು ತನ್ನಲ್ಲಿಯೇ ಸಹಿಸಿಕೊಂಡು ಮುಂದುವರೆಯುತ್ತದೆ').
- It goes with patience and endurance (ತಾಳ್ಮೆ, ಸಹನೆ) and is a part of enthusiasm.
(c)
- Enthusiasm is gained by being courageous or by having patience and endurance: 'ಯಾರು ಧೈರ್ಯಶಾಲಿಗಳಾಗಿರುತ್ತಾರೋ, ಇಲ್ಲವೆ ತಾಳ್ಮೆ ಸಹನೆಯ ಗುಣಗಳನ್ನು ಹೊಂದಿರುತ್ತಾರೋ ಅವರು ಅದರ ಸಂತೋಷವನ್ನು ಅನುಭವಿಸುತ್ತಾರೆ'.
- It needs the joy of enthusiastic activity to bear pain and loss ('ನೋವು ಮತ್ತು ನಷ್ಟವನ್ನು ಸಹಿಸಿಕೊಳ್ಳಲು ಉತ್ಸಾಹಭರಿತ ಕ್ರಿಯಾಶೀಲತೆಯ ಸಂತೋಷದ ಅಗತ್ಯವಿದೆ').
- Its search is not weakness but the quality of bearing pain; patience and courage together make it ('ತಾಳ್ಮೆ ಮತ್ತು ಧೈರ್ಯಗಳೆರಡೂ ಉತ್ಸಾಹಶೀಲತೆಯ ಭಾಗನೇ ಆಗಿರುತ್ತವೆ').
(d)
- As fear takes the place of sorrow, enthusiasm takes the place of joy ('ದುಃಖದ ಸ್ಥಾನದಲ್ಲಿ ಭಯವು ಆವರಿಸುತ್ತದೆ. ಹಾಗೆಯೇ ಆನಂದದ ಸ್ಥಾನದಲ್ಲಿ ಉತ್ಸಾಹವಿರುತ್ತದೆ').
- Enthusiasm is itself a joy-giving power ('ಒಂದು ರೀತಿಯ ಸಂತೋಷದಾಯಕ ಶಕ್ತಿ').
- Joy in turn keeps people enthusiastic: adventurers who explore and travel to the Sahara and dense forests remain enthusiastic 'ಈ ರೀತಿಯ ಸಂತೋಷದಿಂದಲೇ'.
(e)
- Those with strength and special qualities have the wealth of courage and compassion; they bear pain and hardship and spread generous values of life.
- Donors, having faced hardships from their own experience, show greatness through lifelong giving; those who face life's hardships hold 'ಶಕ್ತಿಯ ವಿಶೇಷತೆ ಮತ್ತು ತ್ಯಾಗದ ಸಂಪತ್ತನ್ನು' and a large heart ('ಹೃದಯ ವೈಶಾಲ್ಯ').
- Earlier the passage calls such streams of affection and love 'ಧೈರ್ಯ ಮತ್ತು ತ್ಯಾಗವನ್ನು ತೋರಿಸುವ ಸಂಪತ್ತಿನ ವಾಹಕಗಳಾಗಿರುತ್ತಾರೆ': strength and sacrifice go together.
Conclusion
Keep each answer to the point; the examiner looks for the passage's own link between courage, perseverance, joy and sacrifice.
Facts to remember
- The passage names three kinds of heroism given by literary theorists: ಯುದ್ಧವೀರತ್ವ (heroism in war), ದಾನವೀರತ್ವ (heroism in giving) and ದಯಾವೀರತ್ವ (heroism in compassion); war-heroism is called the oldest.
- Key idea: ಧೈರ್ಯ (courage), ಪರಿಶ್ರಮ (perseverance) and ತಾಳ್ಮೆ (patience) are parts of ಉತ್ಸಾಹಶೀಲತೆ (enthusiasm), which is a joy-giving power.