ಕೆಳಕಂಡ ಪಠ್ಯವನ್ನು ಅದರ ಮೂರನೆಯ ಒಂದು ಭಾಗಕ್ಕೆ ಮೀರದಂತೆ ಸಂಗ್ರಹಿಸಿ ನಿಮ್ಮದೇ ಆದ ಪದಗಳಲ್ಲಿ ಬರೆಯಿರಿ, ಅದಕ್ಕೆ ಶೀರ್ಷಿಕೆ ಕೊಡಬೇಡಿ : (60)
ಆಹ್ಲಾದಕರವಾದ ಜೀವನ ಹವ್ಯಾಸಗಳಲ್ಲಿ ಉತ್ತಮ ಕೇಳುಗನಾಗಿರುವುದು ಅತ್ಯಂತ ಮಹತ್ವದ ವಿಷಯ. ಆದರೂ ನಮ್ಮಲ್ಲಿ ಹೆಚ್ಚಿನವರಿಗೆ ಅದನ್ನು ಹೇಗೆ ಮಾಡುವುದೆಂದು ಗೊತ್ತಿಲ್ಲ. ನಾವು ಕೆಟ್ಟವರೆಂದೇನೂ ಅಲ್ಲಾ, ಬದಲಿಗೆ ನಮಗೆ ಅದನ್ನು ಯಾರೂ ಕಲಿಸಿಲ್ಲ. ಜೊತೆಗೆ ನಮ್ಮ ಮಾತನ್ನೂ ಹೆಚ್ಚಿನವರು ಸರಿಯಾಗಿ ಕೇಳಿಸಿಕೊಂಡಿಲ್ಲ. ಇದಕ್ಕೆ ಸಂಬಂಧಪಟ್ಟಂತೆ ಏನನ್ನು ಕೇಳಬೇಕು, ಹೇಗೆ ಕೇಳಬೇಕು ಎಂಬುದು ನಮಗೆ ತಿಳಿಸಿರುವುದಿಲ್ಲ. ಸಾಮಾಜಿಕ ಜೀವನದಲ್ಲಿ ನಮಗೆ ಮಾತಿಗಿಂತಲೂ ಹೆಚ್ಚು ಕೇಳಲು ಬಯಸುವ ದುರಾಸೆ ಆವರಿಸುತ್ತದೆ. ಇತರರರನ್ನು ಭೇಟಿಯಾಗುವ ಹಸಿವಿರುತ್ತದೆ ಆದರೆ ಅವರ ಮಾತು ಕೇಳಲು ನಿರುತ್ಸಾಹವಿರುತ್ತದೆ. ಗೆಳತನವು ಸಾಮಾಜಿಕ ಸ್ವಾರ್ಥವಾಗಿ ಅವನತಿ ಹೊಂದುತ್ತದೆ. ಯಾರು ಉತ್ತಮ ಕೇಳುಗರಾಗಿರುತ್ತಾರೋ ಅವರು ಅವರು ಹಲವಾರು ಕಾರ್ಯಗಳನ್ನು ನಿರ್ವಹಿಸುತ್ತಿದ್ದು ಅವರ ಜೊತೆ ಕಾಲಕಳೆಯುವುದು ಸಂತೋಷಕರವಾಗಿರುತ್ತದೆ. ಅವರು ಯಾವುದೇ ಸಂದರ್ಭದಲ್ಲೂ ತಮ್ಮ ತಪ್ಪುಗಳನ್ನು ಅಂತರ್ನಿರೀಕ್ಷೆಗೆ ಮಾಡಿಕೊಳ್ಳುತ್ತಾರೆ. ಸಂಭಾಷಣೆ ಮತ್ತು ಭಾವನೆಗಳ ಹಂಚಿಕೆಯಲ್ಲಿ ನಾವು ನಮಗೆ ತಿಳಿಯಲಾರದ ಕೆಲವು ಸಂಗತಿಗಳಿಗೆ ಪಕ್ಕಾಗುತ್ತೇವೆ. ನಾವು ಯಾವುದೇ ಕೆಲಸಕ್ಕೆ ಹೆದರುವುದಿಲ್ಲ. ಆದರೆ ಮಹತ್ವಾಕಾಂಕ್ಷೆಯ ಸಂದರ್ಭಗಳಲ್ಲಿ ನಮ್ಮ ಜೀವನದ ಉದ್ದೇಶಗಳನ್ನು ಈಡೇರಿಸಿಕೊಳ್ಳಲು ಸರಿ ತಪ್ಪುಗಳ ಇಲ್ಲವೇ ಸಾಧ್ಯ-ಅಸಾಧ್ಯತೆಗಳ ಗೋಜಿಗೆ ಹೋಗುವುದಿಲ್ಲ. ಸಂಬಂಧಗಳಲ್ಲಿ ಕಠಿಣತೆಯ ಜೀವನಕ್ಕೆ ಬೇಕಾಗುವ ಎಲ್ಲಾ ಬಗೆಯ ಭಾವ ಪ್ರಪಂಚದಿಂದ ನಾವು ಪ್ರಭಾವಿತರಾಗುತ್ತೇವೆ. ಇಂತಹ ಸಂದರ್ಭದಲ್ಲಿ ಒಳಿತು ಕೆಡುಕುಗಳ ವಿವೇಚನೆಯನ್ನು ಹೊಂದಬೇಕಿದೆ. ಭಾವನಾತ್ಮಕ ಮತ್ತು ಸ್ಫೂರ್ತಿದಾಯಕವಾಗಿಯೂ ನಮ್ಮಲ್ಲಿನ ಭಾವನೆಗಳನ್ನು ನಾವು ನಿರಸನಗೊಳಿಸಬೇಕಾಗುತ್ತದೆ.
ಕೆಲವೊಮ್ಮೆ ಹೃದಯ ಪೂರ್ವಕವಾಗಿ ಹೇಳುವುದಾದರೆ ಇವುಗಳೆಲ್ಲವೂ ಬೇರೆ ಬೇರೆ ವಿಚಾರಗಳ ಶೋಧ ಅಥವಾ ಅವುಗಳ ಸ್ಪಷ್ಟೀಕರಣ ಅಗತ್ಯವಾಗಿರುತ್ತದೆ. ಒಳ್ಳೆಯ ಕೇಳುಗನು ಯಾವಾಗಲೂ, ಸಂಭಾಷಣೆ ಮಾಡುವಾಗಲೂ-ಇತರರ ಬಗ್ಗೆ ಯಾವುದೇ ಸಂಶಯ ಪಡದೆ; ಅವರ ವಿರುದ್ಧ ತನ್ನ ಮನಸ್ಸಿನಲ್ಲಿ ಕಹಿ ಭಾವನೆಗಳನ್ನು ಹೊಂದದೆ ಆಶಾದಾಯಕವಾಗಿರುತ್ತಾನೆ. ಜೊತೆಗೂಡಿ ಸಾಗಬೇಕೆಂಬ ಹಂಬಲವುಳ್ಳವನಾಗಿರುತ್ತಾನೆ. ಈ ಬಗೆಯ ಕಾರ್ಯಗಳು ಅವನಿಗೆ ನಿರ್ದಿಷ್ಟವಾದ ದಾರಿಯನ್ನು ತೋರಿಸುತ್ತವೆ. ವಾಸ್ತವವಾಗಿ ಇದು ಹೀಗೆಯೇ ಸಂಭವಿಸುತ್ತದೆಂದು ನಾವು ಹೇಳಲಾರೆವು. ನಮ್ಮಲ್ಲಿನ ಆಸೆಗಳನ್ನು ನಿಯಂತ್ರಿಸುವ ಪ್ರತ್ಯುತ್ಪನ್ನಮತಿತ್ತ್ವ ಸಂಭಾಷಣೆಯ ನೈಜತೆಯನ್ನು ಸ್ಪಷ್ಟೀಕರಣಗೊಳಿಸಲು ಅವನು ಯಾವಾಗಲೂ ತನ್ನ ಮನಸ್ಸನ್ನು ಮುಕ್ತವಾಗಿರಿಸಿರುತ್ತಾನೆ. ಬಹಳಷ್ಟು ಜನ ಉತ್ತಮ ಕೇಳುಗರಾರಾಗಿರುವುದಿಲ್ಲ. ಆದರೆ ಕೆಲವು ಕೇಳುಗರು ತಾವು ಕೇಳಿದ್ದನ್ನು ಬೇರೆಯವರಿಗೆ ವಿವರಿಸಲು ಅಸಮರ್ಥರಾಗಿರುತ್ತಾರೆ, ಅವರು ತಾವು ಹೇಳಿದ ನಿಜವನ್ನು ಸಾಧಿಸುವವರಾಗಿರುತ್ತಾರೆ. ಕೆಲವರು ಸತ್ಯವನ್ನು ಮುಚ್ಚಿಡಲು ಬಯಸುತ್ತಾರೆ. ಇನ್ನೂ ಕೆಲವರು ಸಂತೋಷದ ಕ್ಷಣಗಳಲ್ಲಿ ದುಃಖ ಮತ್ತು ಭಾವುಕತೆಯು ಪರವಶತೆಯನ್ನು ತೋರಿಸುತ್ತಾರೆ. ಆದರೆ ಕೇಳುಗರು ಅದರಿಂದ ಭಾವಪರವಶರಾಗುವುದಿಲ್ಲ. ಇವುಗಳನ್ನು ಆಯಾ ಸಂದರ್ಭಕ್ಕೆ ಅನುಗುಣವಾಗಿ ಶೋಧಿಸುತ್ತಲೇ ಈ ಎಲ್ಲವನ್ನು ಹೇಳಬೇಕಾಗುತ್ತದೆ. ಒಳ್ಳೆಯ ಕೇಳುಗರು ಇದಕ್ಕಾಗಿ ಜಗಳವಾಡುತ್ತಾರೆ. ಇದು ಅವರ ಸಂವಾದಿಸುವ ತಂತ್ರವೂ ಆಗಿರುತ್ತದೆ.
ಕೆಲವರು ತಮ್ಮ ವ್ಯಕ್ತಿತ್ವವನ್ನು ತಮ್ಮ ಅಭಿವ್ಯಕ್ತಿಯ ಮೂಲಕ ವ್ಯಕ್ತಪಡಿಸುತ್ತಾರೆ. ಅವರು ನಮಗೆ ಸ್ಫೂರ್ತಿದಾಯಕವಾಗುವಂತೆ ಮಾಡುತ್ತಾರೆ. ನಮ್ಮ ಚಟುವಟಿಕೆಗೆ ಅವರ ಬೆಂಬಲ ಯಾವಾಗಲೂ ಬೇಕಾಗುತ್ತದೆ. ಅವರ ಉತ್ತಮ ವ್ಯಕ್ತಿತ್ವದಿಂದ ಸಕಾರಾತ್ಮಕ ಗುಣಗಳನ್ನು ನಮ್ಮಲ್ಲಿ ಹೆಚ್ಚಿಸುತ್ತ ಹೋಗುತ್ತಾರೆ. ನಮ್ಮ ದುಃಖದ ಸಂದರ್ಭದಲ್ಲಿ ನಮಗೆ ಸಹಾನುಭೂತಿ ತೋರಿಸಿ ನಮ್ಮನ್ನು ಮತ್ತೆ ಹುರುಪುಗೊಳಿಸಿ ನಾವು ಮತ್ತೆ ಶಕ್ತಿವಂತರಾಗುವಂತೆ ಮಾಡುತ್ತಾರೆ. ಎಲ್ಲಾ ಸಂದರ್ಭಗಳಲ್ಲಿಯೂ ಅವರು ಆಳವಾಗಿ ಯೋಚಿಸಿ ನಾವು ನಿರ್ಧಾರ ಕೈಗೊಳ್ಳಲು ಸಹಾಯ ಮಾಡುತ್ತಾರೆ. ಅವರು ನಮ್ಮನ್ನು ಪ್ರೀತಿಸುತ್ತಾ ಹೇಳುತ್ತಾರೆ “ಇನ್ನಷ್ಟು ವಿಸ್ತರಿಸಿ ಹೇಳು”, “ನಾನು ನಿಮ್ಮಿಂದ ಆಕರ್ಷಿತನಾದೆ” ಅದು - ಹೀಗಾಗಲು ಕಾರಣವೇನು ನಿನಗೆ ಏನು ಅನ್ನಿಸುತ್ತಿದೆ... ಹೀಗೆ ಉತ್ತಮ ಕೇಳುಗರು ನಮಗೆ ನಮ್ಮ ಮುಂದೆ ಬಂದಿರುವ ಸಮಸ್ಯೆಗಳನ್ನು ಬಿಡಿಸಿ ಎದುರಿಸುವ ಶಕ್ತಿಯನ್ನು ಬಲಗೊಳಿಸುತ್ತಾರೆ. ಆದರೆ; ಅವರೆಂದೂ ನಮ್ಮನ್ನು ನಿಂದಿಸುವುದಿಲ್ಲ. ನಿರಾಶರಾಗಿಸುವುದಿಲ್ಲ. ಅಧೀರಗೊಳಿಸುವುದಿಲ್ಲ. ಯಾಕೆಂದರೆ; ವಿಶ್ವಾತ್ಮಾಕವಾದ ಭಾವನೆಗಳನ್ನು ಅವರು ನಮ್ಮ ಮನಸ್ಸಿನಲ್ಲಿ ನೆಲೆಗೊಳಿಸುತ್ತಾರೆ. ನಿಜವಾದ ಸ್ನೇಹಿತರು ಯಾವಾಗಲೂ ನಮಗೆ ಸಹಾಯ ಮಾಡುವವರೇ ಆಗಿರುತ್ತಾರೆ. ನಾವು ಯಾವ ಸಂದರ್ಭದಲ್ಲಿಯೇ ಆಗಲಿ ನಮ್ಮ ಶಕ್ತಿ ಸಾಮಾರ್ಥ್ಯವನ್ನು ಹೆಚ್ಚಿಸಿಕೊಳ್ಳಲು ಒಳ್ಳೆಯ ಸಹವಾಸವನ್ನು ಮಾಡಬೇಕಾಗುತ್ತದೆ. ಉತ್ತಮ ಕೇಳುಗನು ಅನೇಕ ಲಾಭಗಳನ್ನು ಪಡೆಯುತ್ತಾನೆ. ಅವನು ಬೇರೆಯವರಿಂದ ಸ್ಫೂರ್ತಿಪಡೆಯುತ್ತಾನೆ. ವಿವರವಾದ ಮಹತ್ವದ ಮಾಹಿತಿಯನ್ನು ಸಂಗ್ರಹಿಸುತ್ತಾನೆ. ಕೇಳಿದ ಸಂಗತಿಗಳಿಂದ ಪ್ರೇರಣೆ ಪಡೆದು ಮುನ್ನಡೆಯುತ್ತಾನೆ. ಸರಳವಾಗಿ ಹೇಳುವುದಾದರೆ, ಮಂತ್ರವಾಕ್ಯಗಳಂತೆ ನಾವು ಆ ಸಂದೇಶಗಳಿಂದ ಪ್ರೇರಿತರಾಗುತ್ತೇವೆ. ಮತ್ತಷ್ಟು ಹೊಸ ವಿಷಯಗಳನ್ನು ಕಲಿಯುತ್ತೇವೆ. ಬಾಲಕರಾಗಿದ್ದಾಗ ನಾವು ಸಂಬಂಧಗಳನ್ನು ಹೆಣೆಯುವುದು ಹೀಗೆಯೇ ಅಲ್ಲವೇ ? ಇಷ್ಟೆಲ್ಲಾ ಬದಲಾವಣೆ ಹೇಗೆ ತಾನೇ ಸಾಧ್ಯವಾಯಿತು. ಅವರಿಗೂ ನಮ್ಮ ಹಾಗೆ ಕೇಳುವ ಉತ್ಸಹವಿದೆ. ಅವರು ನಮಗೆ ಹೀಗೆ ಕೇಳಬಹುದು. ನೀನು ಯಾಕೆ ತನ್ನ ಮಾತಿನಂತೆ – ನಡೆಯಲಿಲ್ಲ. ಇದು ನಿನಗೆ ಮಹತ್ವದ ವಿಷಯವೆಂದು ತಿಳಿಯಲಿಲ್ಲವೆ ? ಅವರು ನಮ್ಮ ಎಲ್ಲಾ ಚರಿತ್ರೆಯನ್ನು ತಮ್ಮ ಮನಸ್ಸಿನಲ್ಲಿರಿಸುತ್ತಾರೆ. ಕೆಲ ಸಂದರ್ಭದಲ್ಲಿ ಅವುಗಳನ್ನು ಪುನಃರುಚ್ಚರಿಸುತ್ತಾರೆ. ಒಟ್ಟಿನಲ್ಲಿ ಅವರು ನಮ್ಮ ನಡುವೆ ಸೇತುವೆಯಾಗಿ ಆಳವಾದ ಜೀವನ ಶ್ರದ್ಧೆಯನ್ನು ಬೆಳೆಸಿ ನಾವು ಸದಾ ಕ್ರಿಯಾಶೀಲರಾಗುವಂತೆ ಮಾಡುತ್ತಾರೆ. ಕೊನೆಯದಾಗಿ ಈ ಅಸ್ಪಷ್ಟ ವಿಷಯದ ಬಗೆಗೆ ಸುಲಭವಾಗಿ ಹೇಳಬಹುದು. ನಾವು ಸರಳವಾಗಿ ಹೇಳುವುದಾದರೆ ಅದು ಅತ್ಯಂತ ಸುಂದರ, ಇಲ್ಲವೇ ಭಯಾನಕ, ಸಂತೋಷದಾಯಕ ಇಲ್ಲವೇ ಕಿರಿಕಿರಿಯನ್ನುಂಟು ಮಾಡುವ ವಿಷಯ. ಆದರೆ, ನಾವು ನಿಜವಾಗಿ ಕಂಡುಕೊಳ್ಳಲು ಸಾಧ್ಯವಾಗುವುದಿಲ್ಲ. ಉತ್ತಮ ಕೇಳುಗ ಒಬ್ಬ ಒಳ್ಳೆಯ ಉತ್ಪಾದಕ. ಸ್ನೇಹಮಯ ಅನುಮಾನಗಾರ. ನಮ್ಮ ಆಳ ಪ್ರವೃತ್ತಿಯ ಮೂಲ ಸೂಪ್ತ ಹಿನ್ನಲೆಯವನಾಗಿರುತ್ತಾನೆ.
(468 ಪದಗಳು)
60 marks · directive: Precis
The core of a good answer
A precis of at most 156 words in Kannada: good listening is a valuable but untaught life skill; good listeners stay open-minded and free of suspicion, help us clarify our thoughts and feelings, encourage and strengthen us, and gain inspiration and knowledge themselves.
An outline written by upsc.help, not an official UPSC answer; every fact checked by a separate review. How we work
What the question asks
The passage is printed as 468 words, so one-third is 156 words, and the instruction says 'not more than' one-third: aim for about 145 to 156 words in Kannada. Read twice, list the main ideas, drop the quoted prompts, examples and repetitions, and rewrite in your own Kannada sentences. No title is to be given.
Answer outline
Introduction
Method: note the printed length (468 words), keep within 156 words, keep the order of ideas, and avoid copying whole sentences from the passage.
Main ideas in order
- Being a good listener is one of the most important habits of a pleasant life, yet most of us do not know how, not because we are bad but because nobody taught us and few listened to us properly.
- In social life we are eager to meet others but unwilling to listen to them; friendship declines into social selfishness.
- Good listeners are pleasant company and examine their own mistakes.
- In conversation we meet feelings and situations we do not understand; ambition can make us ignore right and wrong, and we need discernment to sort out our emotions.
- What we say often needs exploring and clarifying. A good listener does not suspect the speaker, holds no bitterness, is hopeful, wants to go forward together and keeps an open mind to bring out the truth of the conversation.
- Many people are not good listeners: some cannot convey what they heard, some hide the truth, some are carried away by emotion. A good listener is not swept away, but probes each matter as the situation needs; this is his way of conversing.
- Good listeners inspire and support us, build positive qualities in us, comfort us in sorrow and restore our strength, help us think deeply and decide, and gently ask us to say more.
- They strengthen us to face problems and never blame or discourage us, because they build trust; true friends of this kind are worth keeping company with.
- The good listener also gains: inspiration, valuable information and motivation, and keeps learning new things.
- They remember our story, recall it when needed, act as a bridge and keep us active.
- In short, the good listener is a good producer, a friendly questioner and the hidden background behind our deeper tendencies.
Conclusion
Check the word count, make sure every main idea is present in order, and remove any title.
Facts to remember
- Printed length: 468 words (stated on the paper); one-third is 156 words.
- The instruction is 'ಮೂರನೆಯ ಒಂದು ಭಾಗಕ್ಕೆ ಮೀರದಂತೆ' (not exceeding one-third) and 'ಶೀರ್ಷಿಕೆ ಕೊಡಬೇಡಿ' (do not give a title).